ಎಡ್ಗರ್ ಡೌಗ್ಲಾಸ್ ಆಡ್ರಿಯನ್(30 ನವಂಬರ್ 1889 – 4 ಆಗಸ್ಟ್ 1977) 1932ರ ಶರೀರಕ್ರಿಯಾಶಾಸ್ತ್ರ ಮತ್ತು ವೈದ್ಯಕೀಯದ ನೊಬೆಲ್ ಪ್ರಶಸ್ತಿಯನ್ನು ಬ್ರಿಟನ್ನಿನ ಮತ್ತೊಬ್ಬ ನರತಜ್ಞ ಷೆರಿಂಗ್‍ಟನ್ ಸರ್ ಚಾಲ್ರ್ಸ್‍ಸ್ಕಾಟ್‍ನೊಂದಿಗೆ ಹಂಚಿಕೊಂಡ. == ಬಾಲ್ಯ ಮತ್ತು ವಿದ್ಯಾಭ್ಯಾಸ == ಅಡ್ರಿಯನ್ ೧೮೮೯ರಲ್ಲಿ ಲಂಡನ್ನಿನ ಹಂಪ್‍ಸ್ಟಡ್ ಎಂಬಲ್ಲಿ ಜನಿಸಿದ.ತಂದೆ ಆಲ್ಫ್ರೆಡ್ ಡಗ್ಲಾಸ್ ಆಡ್ರಿಯನ್ ಸ್ಥಳೀಯ ಸಂಸ್ಥೆಗಳ ಕಾನೂನು ಸಲಹೆಗಾರನಾಗಿದ್ದ.>. – 4412</> 1915ರಲ್ಲಿ ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದ. == ಸಂಶೋಧನೆ == ನರಕೋಶಗಳ ಉದ್ರೇಕತೆಯ ಕಾರ್ಯ ವಿವರಣೆಯನ್ನು ಕೂಲಂಕಷವಾಗಿ ವಿವರಿಸಿರುವ ಕೀರ್ತಿ ಇವನದು. ಮೂರ್ಛೆ ರೋಗ ಮತ್ತು ಮೆದುಳಿಗೆ ಸಂಬಂಧಪಟ್ಟ ಸಂಶೋಧನೆಗಳಿಗೆ ಇವನ ಕೊಡುಗೆ ಹೊಸ ಹಾದಿಯನ್ನು ತೆರೆಯಿತು. 1950 ರಿಂದ 1955 ರವರೆಗೆ ಈತನು ರಾಯಲ್ ಸೊಸೈಟಿಯ ಅಧ್ಯಕ್ಷನಾಗಿದ್ದ. == ಪ್ರಶಸ್ತಿ ಮತ್ತು ಗೌರವಗಳು == 1942ರಲ್ಲಿ ಆರ್ಡರ್ ಆಫ್ ಮೆರಿಟ್ ಪಾರಿತೋಷಕವನ್ನು ಪಡೆದ. 1955ರಲ್ಲಿ ಬ್ಯಾರೋನಿ ಪದಕ ಲಭಿಸಿದೆ. ನರವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ಪ್ರಕಟಣೆಗಳಿವೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == , . (1932). " ". . . 2001-10-30. 2008-07-23. {{ }}: |= () ,